ಮರೆತರು ಮರೆಯಲಾಗದ ನೆನಪುಗಳು

                           

 ಕಾಡುತ್ತಲಿವೆ ಸುಮ್ಮನೆ ಕಳೆದು ಹೋದ ಆ ದಿನಗಳು
ಮೋಡಿ ಮಾಡುತ್ತಲಿವೆ ಕತ್ತಲು ಕವಿದ ಆ ನೆನಪುಗಳು
ನೋಡಿ ನೋಡದಂತೆ ಕಳೆದು ಹೋದವು ಆ ಕ್ಷಣಗಳು

ಮತ್ತೆಂದು ಸಿಗದು ಮಳೆಯಲ್ಲಿ ನೆಂದ ಆ ಹನಿಗಳು
ಮಾತಿಗೆ ಮಾತು ಬೆಳೆದು ಜಗಳಾಡಿದ ಆ ವಿಷಯಗಳು
ಮತ್ತೆ ಕ್ಷಮೆಯಿಲ್ಲದೆ ಶುರುವಾದ ಆ ಮುಂಜಾನೆಗಳು

ಕೇಳದೇನೆ ನೆನಪಿಗೋಸ್ಕರ ಕೊಟ್ಟ ಆ ಡಿಕ್ಷನರಿಗಳು
ಅವುಗಳ ಮೇಲೆ ಬರೆದಿದ್ದ ಆ ಶುಭ ಸಂದೇಶಗಳು
ಮರೆಯಲಾಗದು ಮುತ್ತಿನಂತಹ ಆ  ಮಾತುಗಳು

ಒಮ್ಮೊಮ್ಮೆ ನೆನಪಿಗೆ ಬಂದು ಮತ್ತೆ ಮಾಯವಾಗಿ
ಮತ್ತೆಂದೂ ಮಾಸವಾಗದ ಮನದ ಘಾಯಗಳಾಗಿ
ಘಾಸಿ ಮಾಡಿ ಹೋದ ಸ್ಮೃತಿಪಟಲದ ಗುರುತುಗಳವು
By
     Bheeresh Honagond

Comments

Popular posts from this blog

ಓ ನನ್ನ ಒಲವೆ